Friday, August 28, 2009

ಮನಸಿನ ದಾಹವ ತಣಿಸುವ ಆಸೆ ....

ಮನಸಿನ ದಾಹವ ತಣಿಸುವ ಆಸೆ

ಸಾಗರಕೆ ಗಾಳವ ಹಾಕುವ ಕೂಸೆ!


ಗಾಳಕೆ ಸಿಗದ ಗೀಳುಗಳೆಷ್ಟೋ

ಗಾಳವ ನುಂಗಿದ ದಿನಗಳೆಷ್ಟೋ !

ಮರುಳಾದೆ ನಿನ್ನ ತುಂಬು ಪ್ರೀತಿಗೆ

ಘಾಸಿಮಾಡಿದೆ ಹೃದಯವ ಆ ನಗೆ!!


ಮನಸಿನ ದಾಹವ ತಣಿಸುವ ಆಸೆ

ಸಾಗರಕೆ ಗಾಳವ ಹಾಕುವ ಕೂಸೆ!


ಮರೆಯಬೇಡ ಮಮತೆಯ ಜೀವವೇ

ಸ್ಫೂರ್ತಿಯ ಸೆ(ಅ)ಲೆಯಲಿ ಮಿಂಚಿದೆ ಬಾಳು

ಶಾಂತವಾಗದು ಕಾತುರ ಏಕಾಂತ ಹೃದಯ

ಮರೆಯಲಾಗದು ನಿರಂತರ ಪ್ರೀತಿ ಶ್ರೀಹರಿಯ !!


ಮನಸಿನ ದಾಹವ ತಣಿಸುವ ಆಸೆ

ಸಾಗರಕೆ ಗಾಳವ ಹಾಕುವ ಕೂಸೆ!

ರಾಗಿಯ ಬನದಾಗ ಹಕ್ಕಿ ಕುಂತೈತೆ

ರಾಗಿಯ ಬನದಾಗ ಹಕ್ಕಿ ಕುಂತೈತೆ
ರಾಗದಿ ಒಂದು ಹಾಡು ಹಾಡೈತೆ !

ಮೂಗಿಗೂ(ಮೂಕಿಗೂ) ಕೂಡ ಆಸೆ ತಂದೈತೆ
ಮಗುವಿಗೆ ಚೋವಿಯ ಸವಿನಿದ್ರೆ ತಂದೈತೆ
ಮಾಗಿಯ ಚಳಿಯಲ್ಲೂ ಇಂಪು(ತಂಪು) ತಂದೈತೆ
ಮಂಗಗು ಒಂದು ಸಂಗೀತ ಕಲಿಸೈತೆ !!

ರಾಗಿಯ ಬನದಾಗ ಹಕ್ಕಿ ಕುಂತೈತೆ
ರಾಗದಿ ಒಂದು ಹಾಡು ಹಾಡೈತೆ !

ರಂಗಿನ ನಾಟ್ಯ ಮನದಲ್ಲಿ ಸುಳಿದೈತೆ
ಬೀಗರ ಮನೆಯ ಸವಿಯ ನೆನಸೈತೆ
ಮಗನ ಕಿರುನಗೆಯ ಮಮತೆಯ ಹರಿಸೈತೆ
ತಂಗಿಯ ಒಂದು ಸವಿನೆನಪು ತರಿಸೈತೆ !!

ನೀ ನನ್ನ ಸ್ವರ್ಣ ಮಲ್ಲಿಗೆ-ಸಂಪಿಗೆ

ನೀ ನನ್ನ ಸ್ವರ್ಣ ಮಲ್ಲಿಗೆ-ಸಂಪಿಗೆ

ಮರುಳಾದೆ ನಿನ್ನ ಪ್ರೀತಿಯ ಅಲೆಗೆ !!


ಹೃದಯ ಘಾಸಿಮಾಡಿತ್ತು ನಿನ್ನ ಆ ನಗೆ

ಬಲೆ ಬಿಸಿತ್ತು ಮನಕೆ ನಿನ್ನ ಸಲಿಗೆ !!


ಮಿಂದಿರುವೆ ನಿನ್ನ ಪ್ರೀತಿಯ ಸೆಲೆಗೆ

ಓ ಕೊಡುವೆಯಾ ನನ್ನ ಪ್ರೀತಿಯ ಕರೆಗೆ !!

ಮರುಳಾದೆ ನಿನ್ನ ತುಂಬು ಪ್ರೀತಿಗೆ

ಕೋಟಿ ಕೋಟಿ ನಮನಗಳು ನನ್ನ ಪ್ರೀತಿಯ ಶ್ರೀ ಹರಿಗೆ !!

ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ

ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ

ಸದಾ ಬಾನಲ್ಲಿ ಮೆರೆವ ಮನವೆ ಹರಿಯದೊಂದು ಆಣೆಯಾ !


ಸರಿಯ ತಪ್ಪು ತಿಳಿಯೇ ನಾನು ನಿನ್ನ ಮಾತ್ರ ಮರೆಯೆನು

ನನ್ನ ಕಷ್ಟ ನಿನ್ನದೆಂದು ತಿಳಿದು ನನ್ನ ಬೆಳೆಸೆಯಾ

ಮರೆಯಲಿದ್ದು ಮಾಡುತಿರುವೆ ನನ್ನದೆಂಬ ಕೀರ್ತಿ ಕೆಲಸವ

ನಾನು ಮಾಡಿಹೆನೆಂಬ ಕಾರ್ಯಗಳ ಪ್ರೀತಿಯಿಂದ ಕ್ಷಮಿಸೆಯಾ !!


ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ

ಸದಾ ಬಾನಲ್ಲಿ ಮೆರೆವ ಮನವೆ ಹರಿಯದೊಂದು ಆಣೆಯಾ !


ಮಡದಿ ಮಕ್ಕಳೆಂಬ ಮರಳುನಾಡಿನಲಿ ಅಮೃತದಂತೆ ಬಂದೆಯಾ

ನೀನು ಕೊಟ್ಟವೆಲ್ಲ ಭಾಗ್ಯವೆಂಬ ವಿಷಯವ ಈಗ ನಾನು ಅರಿತಿಹೆ

ನಿನ್ನ ನಾಮಾಮೃತವೆ ಚೆಂದ ಅದ ಅರಿಯುವ ಹಾಗೆ ಮಾಡೆಯಾ

ಗೂಡು ಹಕ್ಕಿ ಹಾಗೆ ನನ್ನ ಹೃದಯ ಮಂದಿರದಲಿ ನೆಲೆಸೆಯಾ !!

ಸಿರಿಯ ತೇರಿನಲ್ಲಿ ಮೆರೆವ ಹರಿಯನಿಂದು ಕಾಣೆಯಾ

ಸದಾ ಬಾನಲ್ಲಿ ಮೆರೆವ ಮನವೆ ಹರಿಯದೊಂದು ಆಣೆಯಾ !

ನಿನ್ನೊಳಗೆ ನಿನ್ನ ಅರಿಯೋ ಧೀರ

ನಿನ್ನೊಳಗೆ ನಿನ್ನ ಅರಿಯೋ ಧೀರ
ಜಗತ್ತಿನ ಚಿಂತೆ ನಿನಗ್ಯಾಕೋ ವೀರ !!

ಬೇರೆಯವರ ಪಾಪಕೆ ನಿನಗ್ಯಾಕೋ ಖಾರ
ಅದ ಶಿಕ್ಷೆ ಕೊಡಲು ಇರುವರು ಹರಿ-ಹರ !!

ಏನು ಸಾಧಿಸುವೆ ತಿಳಿದು ಬೇರೆಯವರ ಕಾರುಬಾರ
ಮನಸ್ಸಿನ ಚಿಂತೆ ಓಡಿಸು ದೂರ ದೂರ !!

ಪ್ರೀತಿ ಪ್ರೇಮವೇ ಕಡೆವರೆಗೆ ನಮಗೆ ಶೂರ
ದಿನ ದಿನವು ಅರಿಯೋ ಶ್ರೀ ರಾಮಮೃತ ಸಾರ !!

ಸುಪ್ರಭಾತ....

ಹೇಳುವೆ ನಿನಗೆ ಸುಪ್ರಭಾತ ....

ನಿನ್ನ ಗೆಳೆತನ ನನಗೆ ಪಾರಿಜಾತ ....


ಪ್ರೀತಿಯಿಂದ ಉಣಬಡಿಸುವೆ ಕೇಸರಿಬಾತ ....

ಮರೆಯದಿರಲಿ ನಮ್ಮನು ಮಮತೆಯ ಏಕದಂತ ....


ಬೆಳೆಸು ನಮ್ಮ ಗೆಳೆತನ ಶ್ರೀ ರಾಮಧೂತ್ ....

ಹೃದಯ ಮಂದಿರದಲ್ಲಿ ನೆಲೆಸಲಿ ದಶರಥ ಸುತ ....

ಶುಭೋದಯ ....

ನಿಮಗೆ ನಾ ಹೇಳುವೆ ಶುಭೋದಯ ...
ಶುರುವಾಯಿತು ಈ ಕವಿಯ ಶಬ್ದಗಳ ಉದಯ ...

ಸಾಲು ಸಾಲು ಕವಿತೆಗಳ ಉದಯ ...
ನನಗೆ ಕೇಳಿಸಿತು ನಿನ್ನ ಪ್ರೀತಿಯ ಕರೆಯ ...

ಮರೆಯಲಾರೆ ನಾನು ನಿನ್ನ ಪ್ರೀತಿಯ ...
ಶುಭವಾಗಲಿ ನಿನಗೆ ಓ ಗೆಳೆಯ ...

ಸಿಕ್ಕಿರುವೆ ನಾನು ನಿನ್ನ ಸೆರೆಯ ...
ಹರಿಸಲಾರೆಯ ನಿನ್ನ ಮಮತೆಯ ಮಳೆಯ ...

ಹಸಿರಾಗಲಿ ನಿನ್ನ ಮನಸಿನ ಬೆಳೆಯ ...
ಸದಾ ನೆನೆಯಬಾರದೆ ನನ್ನ ಪ್ರೀತಿಯ ಶ್ರೀ ಹರಿಯ ...

ಈಗ ಬಂದಿದೆ ನನಗೆ ಮೂಡು ..

ಈಗ ಬಂದಿದೆ ನನಗೆ ಮೂಡು ..

ನಾನು ಬರೆಯುವೆ ಒಂದು ಹಾಡು..

ತಿಳಿದವರಿಗೆ ಹಣ್ಣಿನ ಸಲಾಡು..

ಅರಿತವರಿಗೆ ಬುನ್ದೆ ಲಾಡು..

ಕೇಳ ಬೇಡಿ ಈ ಕವಿಯ ಪಾಡು ..

ಹೊಟ್ಟೆ ತುಂಬಾ ಇದೆ ಕವಿತೆಯ ಗೂಡು ...

ನಿಮ್ಮನ್ನು ಸತಾಯಿಸದೆ ಬಿಡಲಾರೆ ನೋಡು ...

ಕೇಳದಿದ್ದರೆ ನನ್ನ ಪ್ರೀತಿಯ ಹಾಡು ...