Friday, August 28, 2009

ಮನಸಿನ ದಾಹವ ತಣಿಸುವ ಆಸೆ ....

ಮನಸಿನ ದಾಹವ ತಣಿಸುವ ಆಸೆ

ಸಾಗರಕೆ ಗಾಳವ ಹಾಕುವ ಕೂಸೆ!


ಗಾಳಕೆ ಸಿಗದ ಗೀಳುಗಳೆಷ್ಟೋ

ಗಾಳವ ನುಂಗಿದ ದಿನಗಳೆಷ್ಟೋ !

ಮರುಳಾದೆ ನಿನ್ನ ತುಂಬು ಪ್ರೀತಿಗೆ

ಘಾಸಿಮಾಡಿದೆ ಹೃದಯವ ಆ ನಗೆ!!


ಮನಸಿನ ದಾಹವ ತಣಿಸುವ ಆಸೆ

ಸಾಗರಕೆ ಗಾಳವ ಹಾಕುವ ಕೂಸೆ!


ಮರೆಯಬೇಡ ಮಮತೆಯ ಜೀವವೇ

ಸ್ಫೂರ್ತಿಯ ಸೆ(ಅ)ಲೆಯಲಿ ಮಿಂಚಿದೆ ಬಾಳು

ಶಾಂತವಾಗದು ಕಾತುರ ಏಕಾಂತ ಹೃದಯ

ಮರೆಯಲಾಗದು ನಿರಂತರ ಪ್ರೀತಿ ಶ್ರೀಹರಿಯ !!


ಮನಸಿನ ದಾಹವ ತಣಿಸುವ ಆಸೆ

ಸಾಗರಕೆ ಗಾಳವ ಹಾಕುವ ಕೂಸೆ!

5 comments:

  1. ಗೋಪಾಲ್ ನಿಮ್ಮ ಬ್ಲಾಗಿಗೆ ಹೊಸತನ್ನು ನಿರೀಕ್ಷಿಸಿದ್ದೆ..ಆದ್ರೂ ಹಳೆಯದು ಹೇಗೆ ಮಿಸ್ ಆಯಿತು..?
    ಚನ್ನಾಗಿದೆ ಕವನ..ಸಾಗರಕ್ಕೆ ಗಾಳ...?? ಇಡೀ ಸಾಗರವನ್ನೇ ಹಿಡಿದಿಡುವ ಆಸೆಯೇ?

    ReplyDelete
  2. thank you. Hegde sir,
    ಧನ್ಯವಾದಗಳು ಜಲನಯನ ಸರ್.

    ReplyDelete