ಹಾಲಿನಂತಿರುವ ಹಾಳೆಯಲಿ
ನಿನ್ನ ಹೆಸರೇ ಬರೆಯುವೆ
ಹಾಲಿನಂತಿರುವ ಹಾಳೆಯಲಿ
ನಿನ್ನ ಹೆಸರೇ ಬರೆಯುವೆ
ಖಾಲಿ ಅಂಗಳದ ಬಾಳಿನಲಿ
ನಿನ್ನ ಪ್ರೀತಿ ನೆಲೆಸಿದೆ
ಮುಡಿದ ಮಲ್ಲೆ ಮರೆಗೆ ನಿಂತು
ಸುರಿದ ಮೋಡ ಸರಿದು ನಿಂತು
ಪ್ರೀತಿ ಚಂದ್ರನ ಹಾಗೆ ಬಂದು
ತಂಪು ಎನಗೆ ನೀಡಿದೆ
ದರ್ಪಣಕೂ ಕೋಪ ಎನಗೆ
ನೋಡಿತಿಹುದು ನಿನ್ನನೇಕೆ?
ಅರ್ಪಣೆಯೇ ನೀನ್ನ ರೂಪ
ನನ್ನ ಹುಚ್ಚು ಪ್ರೀತಿಗೆ
ಮಧುರ ನೋಟ ಮರಳಿ
ಹೃದಯ ತೋಟ ಅರಳಿ
ಅಮಲೇರಿಸುವ ಮಾದಕತೆ ಎಂಬ
ಪ್ರೀತಿ ಘಮವೇ ಬೀರಿದೆ.
No comments:
Post a Comment